ನೂತನ ಭವನ ‘ಪರಮೇಶ್ವರೀ ‘ಅಮ್ಮಾ’ ಕುಟೀ ಯ ಪ್ರವೇಶೋತ್ಸವ

Share:


15-2-2024 ಗುರುಕುಲದ ನೂತನ ಛಾತ್ರಾವಾಸ ಪರಮೇಶ್ವರೀ ‘ಅಮ್ಮಾ’ ಕುಟೀ ಯ ಪ್ರವೇಶೋತ್ಸವವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಇದೇ ಸಂದರ್ಭದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿಯವರು ಆಗಮಿಸಿ ಪ್ರವೇಶೋತ್ಸವದ ಮೆರುಗನ್ನು ಹೆಚ್ಚಿಸಿದರು. ಸಭಾಕಾರ್ಯಕ್ರಮದಲ್ಲಿ ಸದ್ಗುರುಗಳು ಮಾತನಾಡುತ್ತಾ “ಮೈತ್ರೇಯೀ ಗುರುಕುಲವು ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕಾಗಿ ವೇದ ಶಿಕ್ಷಣವನ್ನು ದೇಶದ ರೂವಾರಿಗಳಾದಂತಹ ಸ್ತ್ರೀಯರಿಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿ, ಇಲ್ಲಿನ ಮಕ್ಕಳಲ್ಲಿ ಇರುವಂತಹ ಶಿಸ್ತು ಹಾಗೂ ಆತ್ಮ ಸಂಯಮ ಇತರರಿಗೆ ಮಾದರಿಯಾಗಿದೆ” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. “ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತಹ ಪರಾ ಹಾಗು ಅಪರಾ ಎರಡು ವಿದ್ಯೆಯನ್ನು ತಿಳಿಯುವ ಮೂಲಕ ಸನಾತನ ಧರ್ಮದ ಉಳಿವಿಗೆ ಹೆಜ್ಜೆ ಹಾಕಬೇಕು” ಎಂದು ಆಶೀರ್ವದಿಸಿದರು.
ಶ್ರೀಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಕುಲಪತಿಗಳ ಬಿ.ಎನ್ ನರಸಿಂಹಮೂರ್ತಿಗಳು ಶ್ರೀ ಸತ್ಯ ಸಾಯಿ ಬಾಬಾರವರ ಪ್ರೇರಣೆಯಿಂದ ನಡೆಯುತ್ತಿರುವ ಸಾಮಾಜಿಕ ಕಾರ್ಯಕಲಾಪಗಳನ್ನು ತಿಳಿಸಿದರು.
ಮಾಣಿಲ ಶ್ರೀಧಾಮ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ, ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ನ ಧರ್ಮದರ್ಶಿಗಳಾದ ಸಂಜೀವ ಶೆಟ್ಟಿ, ಮಹೇಂದ್ರ ಹೆಗಡೆ, ಕೋಟೆಮನೆ ರಾಮಚಂದ್ರ ಭಟ್, ಕಲ್ಲಡ್ಕ ಡಾ||ಪ್ರಭಾಕರ ಭಟ್, ನಿವೃತ್ತ ನ್ಯಾಯಾಧೀಶ ಶ್ರೀಎನ್ .ಕುಮಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಶ್ರೀ ಸೀತಾರಾಮ ಕೆದಿಲಾಯರು, ಅಜೇಯ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ರಂಗಮೂರ್ತಿಗಳು ಹಾಗೂ ಅಜೇಯ ಟ್ರಸ್ಟ್ ನ ಸದಸ್ಯರು, ಶ್ರೀಮಧುಸೂದನ್ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಜಂಪಾಡಿ ಸುಬ್ರಮಣ್ಯ ಭಟ್ ಪ್ರಾಸ್ತಾವಿಕ ನುಡಿಗಳನಾಡುತ್ತಾ ಈ ಸಂಸ್ಥೆಗೆ ಈ ಜಾಗವನ್ನು ನೀಡಿದ ಮಹಾದಾನಿಗಳಾದ ಪರ್ತಜೆ ಶ್ರೀಮತಿ ಪರಮೇಶ್ವರೀ ಅಮ್ಮನವರನ್ನು ಸ್ಮರಿಸಿಕೊಂಡರು. ಕುಮಾರಿ ಪಲ್ಲವಿ ಸ್ವಾಗತಿಸಿದರು. ಅಜಯ್ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಮತಿ ರೂಪಾಲೇಖಾರವರು ವಂದನಾರ್ಪಣೆಗೈದರು. ಕುಮಾರಿ ವನಜ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮೊದಲು ಗುರುಕುಲದ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮವು ನೆರವೇರಿತು.