ಶಾಸ್ತ್ರ = ಜೀವನ, ಜೀವಿಕೆ ಅಲ್ಲ

Share:

ಪ್ರಕೃತ ಸಮಾಜದಲ್ಲಿ ಶಾಸ್ತ್ರ ಎನ್ನುವುದನ್ನು ಪದ ಮಾತ್ರದಿಂದ ಕೇಳಿದವರ ಸಮೂಹ ಒಂದು ಕಡೆಯಾದರೆ ಶಾಸ್ತ್ರವನ್ನು ತಿಳಿದವರು, ತಿಳಿಯುತ್ತಿರುವವರು ಇನ್ನೊಂದು ಕಡೆ. ಪ್ರವಾಹದ ಮಧ್ಯದಲ್ಲಿ ಸಿಕ್ಕಿರುವ ಮರದ ತುಂಡಿನಂತೆ, ಯಾಂತ್ರಿಕ ಜಗತ್ತಿನ ಮಧ್ಯದಲ್ಲಿ ಶಾಸ್ತ್ರಗಳ ಸ್ಥಿತಿ ಇದೆ. ಈ ದೃಷ್ಟಿಯಿಂದ ಅದಕ್ಕೆ ಪೂರಕ ವ್ಯವಸ್ಥೆಗಳು ಆಗುತಿದ್ದು ಕೆಲವರು ಶಾಸ್ತ್ರಾಧ್ಯಯನ ಮಾಡುತ್ತಾ ಅದನ್ನು ಉಳಿಸುವುದರಲ್ಲಿ ತೊಡಗಿದ್ದಾರೆ. ಹೀಗೆ ಶಾಸ್ತ್ರಗಳು ಪಾಠಶಾಲೆ, ಅದಕ್ಕೆ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಂದ ಪ್ರಾರಂಭವಾಗಿ ಶಾಸ್ತ್ರಸಭೆ, ಶಾಸ್ತ್ರೀಯಪರೀಕ್ಷೆ, ಶಾಸ್ತ್ರೀಯಸ್ಪರ್ಧೆಗಳಲ್ಲಿ ಅಂತ್ಯವಾಗುತ್ತಾ ಇವೆ. ಶಾಸ್ತ್ರಗಳ ಪ್ರಕಟೀಕರಣ ಇವೇ ಮೂರು ಸ್ಥಾನಗಳಿಗೆ ಸೀಮಿತವಾಗಿ ಬಿಟ್ಟಿದೆ. ಶಾಸ್ತ್ರವಿದರು ಎನಿಸಿದವರೂ ಃ.ಛಿom, eಟಿgiಟಿeeಡಿiಟಿg ಛಿouಡಿse ಗಳಂತೆ ಶಾಸ್ತ್ರದಲ್ಲಿ ಃ.ಂ, ಒ.ಂ ಹೆಚ್ಚೆಂದರೆ Ph.ಜ ಯನ್ನು ಮಾಡಿ ಅವರದ್ದೇ ಸೀಮಿತ ಪ್ರದೇಶದಲ್ಲಿ ಕೀರ್ತಿ ಗಳಿಸುತ್ತಾ, ಪಾಠಶಾಲೆ ಶಿಕ್ಷಕರೋ, ಪ್ರಾಧ್ಯಾಪಕರೋ ಆಗಿ ಶಾಸ್ತ್ರಗಳನ್ನು ಜೀವಿಕೆಯಾಗಿಸಿಕೊಂಡಿದ್ದಾರೆ. ಆದರೆ ನಿಜವಾಗಿ ಶಾಸ್ತ್ರ ಎನ್ನುವುದು ಜೀವನವಾಗಬೇಕು. ಶಾಸ್ತ್ರ ಎನ್ನುವ ಪದವೇ ತನ್ನ ಅಸ್ತಿತ್ವ ಜೀವನಕ್ಕೆ, ಜೀವಿಕೆಗೆ ಮಾತ್ರ ಅಲ್ಲ ಎಂದು ತಿಳಿಸುತ್ತದೆ.

ದೆÉಥ್ಚೆ ಂಟÉ್ಚ್ಖದೆಸಿÉ್ರ ಎನ್ನುವ ಧಾತು ಮೂಲದ ಶಾಸ್ತ್ರ ಎನ್ನುವ ಶಬ್ದ ಅನುಶಾಸನಾರ್ಥಕ. ಅನುಶಾಸನ ಯಾವುದಕ್ಕೆ? ಯಾರಿಗೆ?

ಶಾಸ್ತ್ರದ ಅನುಶಾಸನ ಜೀವನಕ್ಕೆ. ಕೇವಲ ಶಾಸನ ಮಾತ್ರವಲ್ಲ, ಯಾವುದು ಸರಿ ಯಾವುದು ತಪ್ಪು ಎಂದು ತಿಳಿಸುವ ಓರೆಗಲ್ಲು ಶಾಸ್ತ್ರ. ಪ್ರಭು, ಮಿತ್ರ, ಕಾಂತ ಈ ಮೂವರಂತೆ ಕೆಲಸವನ್ನು ಮಾಡುತ್ತಾ ಜೀವನದ ಲಕ್ಷ್ಯಸಾಧನೆಗೆ, ಶಾಸ್ತ್ರ ಸಹಕಾರಿ ಎನಿಸುತ್ತದೆ.
ಸಾಂಖ್ಯ-ಯೋಗಾದಿ ದರ್ಶನಶಾಸ್ತ್ರಗಳು ಜೀವನಕ್ಕೆ ನೇರವಾಗಿ ಪ್ರಭಾವ ಬೀರಿದರೆ, ಶಿಕ್ಷಾವ್ಯಾಕರಣಾದಿ ವೇದಾಂಗಳು ವೇದಾರ್ಥಕ್ಕೆ ಸಹಕರಿಸುತ್ತಾ ವೇದದ ಮೂಲಕ ಜೀವನೋಪಯೋಗಿಯಾಗಿವೆ.

ದರ್ಶನ ಶಾಸ್ತ್ರ ತನ್ನ ಹೆಸರೇ ಹೇಳುವಂತೆ ಲೋಕದಿಂದ ಕಂಡುಕೊಂಡಿರುವಂತದ್ದು. ಹೀಗಿರುವಾಗ ಅದನ್ನು ಕೇವಲ ಗ್ರಂಥಕ್ಕೆ ಸೀಮಿತಗೋಳಿಸುವುದು ಅದಕ್ಕೆ ನಾವು ಮಾಡುವ ಅನ್ಯಾಯವೇ ಸರಿ. ಯೋಗ ಶಾಸ್ತ್ರವಂತೂ ಯಮ-ನಿಯಮಾದಿಗಳನ್ನು ತಿಳಿಸುತ್ತಾ ಸಂಪೂರ್ಣವಾಗಿ ಸ್ವಸ್ಥಜೀವನದ ಕವಚದಂತಿದೆ. ಆದರೆ ಇಂದು ಯೋಗವು ಚಿಕಿತ್ಸೆಗೆ ಸೀಮಿತವಾಗಿದೆ. ಆಸನಾಭ್ಯಾಸ ಮಾಡಿದರೂ ಜೀವನದಲ್ಲಿ ಅವಶ್ಯಕವಾಗಿರುವ ಮಹಾವ್ರತಗಳ ಪಾಲನೆ ಅತ್ಯಂತ ಕಡಿಮೆಯಾಗಿದೆ.

ಇನ್ನು ಪ್ರಮಾಣಶಾಸ್ತ್ರದ ಪ್ರಾಮಾಣ್ಯ ಲೋಕದ ವ್ಯವಹಾರಕಲ್ಲದೇ ಮತ್ಯಾವುದಕ್ಕಾಗಿ ಇರಲು ಸಾಧ್ಯ! ಇದು ಸರಿಯೋ ಅಲ್ಲವೋ ಎನ್ನುವುದು ಶಾಸ್ತ್ರದಲ್ಲಿ ಮಾತ್ರವಲ್ಲದೇ ವ್ಯವಹಾರದಲ್ಲು ಅತಿಮುಖ್ಯ ಅಲ್ಲವೇ? ಆದರೆ ಕೇವಲ ತರ್ಕವಾಗಿ ಶಾಸ್ತ್ರಸಭೆಯಲ್ಲೇ ನ್ಯಾಯ ಉಳಿದು ಹೋಗಿದೆ. ಶಾಸ್ತ್ರ ತಿಳಿಸುವಂತಹ ಪ್ರತ್ಯಕ್ಷ ಅನುಮಾನಾದಿ ಪ್ರಮಾಣಗಳು ಹಳ್ಳಿಹೈದನೂ ತಿಳಿಯದೇ ವ್ಯವಹಾರದಲ್ಲಿ ಒಪ್ಪುವಂತಹವೇ. ಎಷ್ಟೆಂದರೆ ಶಾಸ್ತ್ರೀಯವಾಗಿ ನಿರೂಪಿಸುವ ಈ ಪ್ರಕ್ರಿಯೆ ಬಂದಿರುವುದೇ ಜನಸಾಮನ್ಯರ ವ್ಯವಹಾರದಿಂದ. ಹೀಗಾಗಿ ಶಾಸ್ತ್ರದಿಂದ ದೂರ ಉಳಿದವರಲ್ಲಿ ಈ ಕುರಿತು ಜ್ಞಾನ ಮೂಡಿಸಬೇಕು.

ಕರ್ಮಕಾಂಡವಾದ ಮೀಮಾಂಸ ಅಲೌಕಿಕವಾದ ಯಾವುದೋ ಕಲ್ಪಿತ ಸ್ವರ್ಗವನ್ನು ಸಾಧಿಸುತ್ತದೆ ಎಂಬುದಕ್ಕಿಂತ ಹವನ ಸಂಸ್ಕಾರಗಳೇ ಮುಂತಾದ ಕರ್ಮಗಳಲ್ಲಿ ಪ್ರೇರೇಪಿಸುತ್ತದೆ. ಈ ಮೂಲಕ ಮನಸ್ಸಿನ ಹಾಗೂ ವಾತಾವರಣದ ಸ್ವಾಸ್ಥ್ಯ ಉಂಟು ಮಾಡುತ್ತಾ ಇಲ್ಲೇ ಯಥಾರ್ಥವಾಗಿ ಸ್ವರ್ಗವನ್ನು ಸಾಧಿಸುತ್ತದೆ ಎನ್ನುದನ್ನು ಅವಶ್ಯವಾಗಿ ತಿಳಿಯಬೇಕು.

ಇನ್ನು ವೇದಾಂತವಾದ ಭಗವದ್ಗೀತೆ ಉಪನಿಷತ್ತುಗಳಂತೂ ಕೇವಲ ಅಲೌಕಿಕ ಬ್ರಹ್ಮವಿದ್ಯೆಯನ್ನು ಮಾತ್ರ ತಿಳಿಸುತ್ತವೆ ಎನ್ನುವುದು ಶಾಸ್ತ್ರದ ಸಂಕೋಚನ. ಮನೋವಿಜ್ಞಾನ, ಶಿಕ್ಷಣಪದ್ಧತಿಗಳನ್ನು ತಿಳಿಸುತ್ತಾ ವರ್ತಮಾನ ಜೀವನಕ್ಕೆ ಅಪಾರವಾದ ಕೊಡುಗೆ ನೀಡಿವೆ ಈ ಶಾಸ್ತ್ರಗಳು. ಸ್ವಸ್ಥ ಮನಸ್ಸನ್ನು ಪಡೆದುಕೊಳ್ಳಲು ಬೇಕಾದ ಸಾಧನಗಳು ಇಲ್ಲಿ ವಿಹಿತವಾಗಿವಾಗಿದೆ. ಸ್ಥಿತಪ್ರಜ್ಞತೆ ಎನ್ನುವುದು ಕೇವಲ ಬ್ರಹ್ಮಜ್ಞಾನಿಯ ಸ್ಥಿತಿಯಲ್ಲ. ಅದೊಂದು ಮಾನಸಿಕಶಕ್ತಿ ಜೀವನವನ್ನು ಸರಿಯಾಗಿ ನೋಡಿದಾಗ ತಾನಾಗೇ ಬರುವಂತಹದ್ದು. ಅದು ಪಕ್ವತೆಯ ಫಲ ಎಂಬುದು ಶಾಸ್ತ್ರದಿಂದ ತಿಳಿಯುವಂತದ್ದೇ.

ಇನ್ನು ವ್ಯಾಕರಣಾದಿ ವೇದಾಂಗಗಳು ಕೇವಲ ಶಾಸ್ತ್ರವಾಗಿ ಉಳಿದಾಗ ಅವುಗಳಿಂದ ಸಿಗಬೇಕಾದ ಫಲ ಸಿಗಲು ಸಾಧ್ಯವೇ ಇಲ್ಲ. ವೇದದ ಅಂಗಗಳಾದ ಅವುಗಳ ಕಾರ್ಯ ವೇದಾರ್ಥದಲ್ಲಿ ಮತ್ತು ರಕ್ಷಣೆಯಲ್ಲಿ. ವೇದಗಳು ಮಾನವಜೀವನದ ಸಾರ. ಜ್ಞಾನದ ಆಕರವಾಗಿರುವ ವೇದ ಜೀವನವೆಂಬ ದಾರಿಯ ದಾರಿ ದೀಪ. ಆ ದೀಪದ ಬೆಳಕಿನಲ್ಲಿ ಸಾಗಿದಾಗಲೇ ಜೀವನಪಥದ ಧ್ಯೇಯ ತಲುಪಲು ಸಾಧ್ಯವಾಗುವಂಥದ್ದು. ವೇದಾಂಗಳಾದ ವ್ಯಾಕರಣ ಹಾಗೂ ಛಂದಶ್ಶಾಸ್ತ್ರಗಳು ಲೌಕಿಕವಾಗಿ ಮಾತ್ರ ಕಂಡುಬರುತ್ತಿವೆ. ವ್ಯಾಕರಣ – ಭಾಷೆಯಲ್ಲಿ, ಛಂದಸ್ಸು ಕಾವ್ಯದಲ್ಲೇ ಉಳಿದು ಹೋಗಿದೆ.

ಶಾಸ್ತ್ರಗಳ ಉಳಿಸುಕೆ ಮತ್ತು ಬೆಳೆಸುವಿಕೆ ಶಾಸ್ತ್ರಾಧ್ಯಾಯಿಗಳ ಕರ್ತವ್ಯವಾಗಿದೆ. ಅದರ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರ ಬೆಳವಣಿಗೆಗೆ ಸಹಕರಿಸಬೇಕಾಗಿರಿವುದು ಪರಮ ಕಾರ್ಯವಾಗಿದೆ. ವೇದವೇ ಸಾರಿ ಹೇಳುತ್ತಿದೆ-

उत देवा अवहितं देवा उन्नयथा पुनः।
उतागश्चक्रुषं देवा देवा जीवयथा पुनः ॥

ಎಂದು. ಪ್ರಕಾಶಿಸುತ್ತಿರುವ ವಿದ್ವಾಂಸರೇ ಕೆಳಗೆ ಬಿದ್ದವರನ್ನು ಮೇಲಕ್ಕೆ ಎತ್ತಿರಿ. ಹಾಗೆಯೇ ತಪ್ಪಿ ನಡೆಯುತ್ತಿರುವವರಲ್ಲಿ ಮತ್ತೆ ಜೀವಿಸುವ ಉತ್ಸಾಹ ಮೂಡಿಸಿ, ಎಂದರೆ ಶಿಕ್ಷಣದ ಮೂಲಕ ವ್ಯಕ್ತಿಯನ್ನು ಸರಿಪಡಿಸಿ ಅವರನ್ನು ಬೆಳೆಸಿರಿ ಎಂದು ಈ ಮಂತ್ರ ಹೇಳುತ್ತಿದೆ.

ಯಾವಾಗ ಜ್ಞಾನ ಪ್ರದರ್ಶನಕ್ಕೆ ಮಾತ್ರ ಅಲ್ಲದೇ ನಿರ್ದಶನವಾಗುತ್ತದೋ ಆಗ ಮಾತ್ರ ಶಿಕ್ಷಣ ಸಾರ್ಥಕವಗುವುದು.

ಹಿಂದೆ ಸಮಾವರ್ತದ ಮೂಲಕ ಗುರುಕುಲ ಶಿಕ್ಷಣ ಮುಗಿಸಿ ಸಮಾಜಕ್ಕೆ ಬರುವ ವ್ಯಕ್ತಿಯನ್ನು ಎಲ್ಲರೂ ಸಂತಸದಿಂದ ಸ್ವಾಗತಿಸುತ್ತಿದ್ದರು. ಕಾರಣ ಅವನಿಂದ (ಅವನ ಜ್ಞಾನದಿಂದ) ಸಮಾಜ ಮತ್ತಷ್ಟು ಉತ್ತಮಗೊಳ್ಳುತ್ತದೆ ಎಂದು. ಅದಕ್ಕೆ ಪೂರಕವಾದ ವರ್ಣಾಶ್ರಮ ಪದ್ಧತಿಯು ನಮ್ಮ ಸಂಸ್ಕೃತಿಯಲ್ಲಿತ್ತು. ಬ್ರಹ್ಮಚರ್ಯದಲ್ಲಿ ಅರಿತ ಜ್ಞಾನವನ್ನು ಅಳವಡಿಸಿಕೊಂಡು ಗೃಹಸ್ಥಾಶ್ರಮದಲ್ಲಿ ಬೆಳೆಸಿ ಅದನ್ನು ತಮ್ಮ ಮಕ್ಕಳಲ್ಲೂ ಸಂಸ್ಕಾರದಂತೆ ಬೀರುತ್ತಿದ್ದರು. ಹೀಗೆ ಶಾಸ್ತ್ರ ಜೀವನದ ಆಧಾರವಾಗಿತ್ತು. ಅದರಂತೆ ಇಂದು ಶಾಸ್ತ್ರೀಯ ಭಾಷೆಯಲ್ಲಿ ಶಾಸ್ತ್ರದ ಅಧ್ಯಯನ ಮಾಡಿ ಅದರಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಶಾಸ್ತ್ರಸಂಪತ್ತನ್ನು ಬೆಳೆಸಿ, ಅದನ್ನು ಸರಳೀಕರಿಸಿ ಜನಸಾಮಾನ್ಯರ ಮನಮುಟ್ಟಿಸುವುದರ ಮೂಲಕ ಸಮಾಜವನ್ನು ಉಳಿಸುವುದು ಪ್ರತಿಯೊಬ್ಬ ಶಾಸ್ತ್ರಾಧ್ಯಾಯಿಯ ಕರ್ತವ್ಯವಾಗಿದೆ. ಇನ್ನೊಮ್ಮೆ ಭಾರತ ಜಗದ್ಗುರುವಾಗಬೇಕು. ಇದು ಶಾಸ್ತ್ರಗಳನ್ನು ಕಲಿತು ಜನಸಾಮಾನ್ಯನ ಮನ ಮುಟ್ಟುವಂತೆ ಕಲಿಸುವ ಪ್ರಕ್ರಿಯೆಯಿಂದ ಮಾತ್ರ ಸಾಧ್ಯ. ಹಾಗಾಗಿ ಜನಸಾಮಾನ್ಯನಿಗೂ ಶಾಸ್ತ್ರವನ್ನು ತಲುಪಿಸುತ್ತಾ ಜೀವಿಕೆಯಾಗಿರುವ ಶಾಸ್ತ್ರವನ್ನು ಜೀವನನ್ನಾಗಿಸೋಣ.

ಶ್ವೇತನಂದಿನೀ
ಮೈತ್ರೇಯೀ ಗುರುಕುಲಮ್