ವಿಶ್ವಯೋಗದಿನ 21.6.2026

Share:

ಮೈತ್ರೇಯೀ ಗುರುಕುಲದಲ್ಲಿ ವಿಶ್ವಯೋಗ ದಿನದ ಅಂಗವಾಗಿ 19-06-2026 ರಿಂದ 21-06-2026 ರವರೆಗೆ ದಿನನಿತ್ಯದ ಯೋಗಾಭ್ಯಾಸದ ಜೊತೆಗೆ ಧ್ಯಾನ, ಯೋಗ ಸಂಬದ್ಧ ಸುಭಾಷಿತ ಪಠನ, ಯೋಗಶಾಸ್ತ್ರದ ಲಘು ಪರಿಚಯ, ಪತಂಜಲಿಯ ಪರಿಚಯ ಹೀಗೆ ಮೂರು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲ್ಪಟ್ಟಿತ್ತು. ಕೊನೆಯ ದಿನ ನೃತ್ಯದ ಜೊತೆಯಲಿ ಯೋಗ ಗುಚ್ಛವನ್ನು ಮಕ್ಕಳು ಪ್ರದರ್ಶಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಜೀವ ಪೂಜಾರಿ ಅವರು ಆಗಮಿಸಿದ್ದು, ಸ್ವ ಯೋಗ ಜೀವನದ ಅನುಭವದ ಜೊತೆಗೆ ಕಾರ್ಯಕ್ರಮದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಇದರ ಜೊತೆಯಲಿ ಸಾಮಾಜಿಕವಾಗಿ ಗುರುಕುಲದ ಮಕ್ಕಳು ಕಡಂಬು, ಕಾಡುಮಠ, ವಿಟ್ಲ ಮಾದರಿ ಶಾಲೆ, ಸಾಲೆತ್ತೂರು ಹೀಗೆ ಅನೇಕ ಶಾಲೆಗಳಲ್ಲಿ ಯೋಗ ತರಬೇತಿಯನ್ನು ನೀಡಿದರು.