ದೀಕ್ಷಾಂತ ಕಾರ್ಯಕ್ರಮ
೧೨ ವರ್ಷಗಳ ಶಿಕ್ಷಣವನ್ನು ಪೂರೈಸಿದಂತಹ 4 ವಿದ್ಯಾರ್ಥಿನಿಯರ ದೀಕ್ಷಾಂತಕಾರ್ಯಕ್ರಮವು 13.06.2024ರಂದು ನೆರವೇರಿತು. ಮೈಸೂರಿನ ದೇವರಾಜ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕಿಯಾದಂತಹ ಡಾ|| ವಿ.ಶ್ರೀಮತಿ ಇವರು ದೀಕ್ಷಾಂತ ಪ್ರಬೋಧನದಲ್ಲಿ ಸರಳವಾಗಿ ಉಪನಿಷದ್ವಾಕ್ಯಗಳಮೂಲಕ ಗುರುಕುಲ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು. ಗುರುಕುಲ ಪ್ರಕಲ್ಪದ ಹಿರಿಯರಾದ ಡಾ|| ರಾಮಚಂದ್ರ ಭಟ್ ಕೋಟೆಮನೆ ಇವರು ಅಧಿಶೀಲ, ಅಧಿಚಿತ್ತ, ಅಧಿಪ್ರಜ್ಞ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು. ಅಭ್ಯಾಗತರಾಗಿ ಶ್ರೀ ಸನತ್ ಕುಮಾರ್ ಶೆಟ್ಟಿ ಹಾಗೂ ಶ್ರೀ ಮಂಜುನಾಥ ಕಾಮತ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಅಭ್ಯಾಗತ ವಚನವನ್ನು ನುಡಿದರು. ಅಜೇಯ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸುಬ್ರಾಯ ಪೈ ಇವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಸರಸ್ವತೀಹವನ ಹಾಗೂ ಸಭಾಕಾರ್ಯಕ್ರಮದ ಕೆಲವು ಚಿತ್ರಗಳು






