ಪ್ರವೇಶೋತ್ಸವ – 2024

Share:
Date: June 20, 2024
Past Events

ನೂತನ ಛಾತ್ರೆಯರ ಪ್ರವೇಶೋತ್ಸವ
ಮೈತ್ರೇಯೀ ಗುರುಕುಲಮ್ ಮೂರುಕಜೆಯಲ್ಲಿ
20 – 06 – 2024 ರಂದು ವಿವಿಧ ಪ್ರದೇಶಗಳಿಂದ ಆಗಮಿಸಿದತಂತಹ ಒಟ್ಟು 30 ವಿದ್ಯಾರ್ಥಿನಿಯರಿಗೆ ಬ್ರಹ್ಮಕೂರ್ಚಹವನವನ್ನು ಮಾಡಿ ದೀಕ್ಷೆಯನ್ನು ಕೊಡುವುದರ ಮೂಲಕ ಪ್ರವೇಶೋತ್ಸವ ಕಾರ್ಯಕ್ರಮವು ನೆರವೇರಿತು. ಅಧಿಶೀಲಸ್ತರಕ್ಕೆ 26ವಿದ್ಯಾರ್ಥಿಗಳು ಹಾಗೂ ಅಧಿಪ್ರಜ್ಞಸ್ತರಕ್ಕೆ 4 ವಿದ್ಯಾರ್ಥಿನಿಯರು ಪ್ರವೇಶವನ್ನು ಪಡೆದಿದ್ದಾರೆ.

ಮೂರೂ ಗುರುಕುಲಗಳ ಮಾರ್ಗದರ್ಶಕರಾದಂತಹ ಕಜಂಪಾಡಿ ಸುಬ್ರಹ್ಮಣ್ಯ ಭಟ್ ರವರು ಉಪಸ್ಥಿತರಿದ್ದು, ಗುರುಕುಲಗಳ ಮಹತ್ವವನ್ನು ತಿಳಿಸುತ್ತಾ ಪ್ರಾಸ್ತಾವಿಕ ನುಡಿಗಳನ್ನು ನುಡಿದರು. ಪರಕ್ಕಜೆ ಗ್ರಾಮದ ವೇದ ವಿದ್ವಾಂಸರಾದಂತಹ ಶ್ರೀಯುತ ಅನಂತ ನಾರಾಯಣ ಪರಕ್ಕಜೆಯವರು ಗುರುವಿನ ಮಹತ್ವವನ್ನು ತಿಳಿಸುತ್ತಾ ವಿದ್ಯಾರ್ಥಿನಿಯರಿಗೆ ಪ್ರಥಮ ಪಾಠವನ್ನು ಬೋಧಿಸಿದರು. ಯಕ್ಷಗಾನ ಕಲಾವಿದರಾದಂತಹ ಪಟ್ಲ ಸತೀಶ್ ರವರು ಉಪಸ್ಥಿತರಿದ್ದು, ವಿದ್ಯೆಯ ಮಹತ್ವವನ್ನು ಜ್ಞಾಪಿಸಿದರು. ಹಾಗೇ ಈ ಕಾರ್ಯಕ್ರಮದಲ್ಲಿ ಅಜೇಯ ಟ್ರಸ್ಟಿನ ಹಿರಿಯರು ಉಪಸ್ಥಿತರಿದ್ದರು. ಮೊದಲ ವರ್ಷದ ಪಾಲಕರ ಹಾಗೂ ಗುರುಕುಲದ ಆಚಾರ್ಯ -ಮಾತೃಶ್ರೀಯರು, ಪ್ರಬಂಧಕರು ಮತ್ತು ಮಕ್ಕಳ ಉಪಸ್ಥಿತಿಯಲ್ಲಿ ಕಾರ್ಯಕ್ರಮವು ಸಂಪನ್ನಗೊಂಡಿತು.