ವಿದ್ಯಾನಿಕಷ ಪರೀಕ್ಷೆ – 2018

Share:
Date: March 19, 2018
Past Events

ಚೈತ್ರ, ಶುದ್ಧ, ದ್ವಿತೀಯಅಂದರೆ 19.3.2018 ರಂದುಗುರುಕುಲದಲ್ಲಿಅರ್ಧಮಂಡಲೋತ್ಸವದ ಅಂಗವಾಗಿ “ವಿದ್ಯಾನಿಕಷ” ಪರೀಕ್ಷೆಯನ್ನು ನಡೆಸಲಾಯಿತು. ವಿದ್ಯೆಯನ್ನೇ ನಿಕಷ ಎಂದರೆ ಓರೆಗಲ್ಲನ್ನಾಗಿರಿಸಿರುವ ವಿದ್ವಾಂಸರಲ್ಲಿ ನಾವು ಪಡೆದ ವಿದ್ಯೆಯ ನಿವೇದನೆಯೇ ಈ ಪರೀಕ್ಷೆಯಉದ್ದೇಶ. ವೇದಮಂತ್ರದಿಂದಕಾರ್ಯಕ್ರಮವುಆರಂಭಗೊಂಡಿತು. ಮಾನ್ಯ ಶ್ರೀ ಜನಾರ್ದನ ವರ್ಮಾಅರಸರು, ಶ್ರೀಯುತ ಎಸ್. ಆರ್.ರಂಗಮೂರ್ತಿ, ಶ್ರೀಯುತ ಟಿ. ಎನ್. ಪ್ರಭಾಕರ್‍ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಉನ್ನತ ಶಿಕ್ಷಣ ವಿಭಾಗದ ಪ್ರಧಾನಾಚಾರ್ಯರಾದ ಶ್ರೀಯುತ ಉಮೇಶಾಚಾರ್ಯಇವರು ಅತಿಥಿಗಳ ಮತ್ತು ವಿದ್ವಾಂಸರ ಪರಿಚಯವನ್ನು ಮಾಡಿ ಸ್ವಾಗತವನ್ನುಕೋರಿದರು. ವಿಟ್ಲಅರಸರಾದ ಶ್ರೀಯುತ ಜನಾರ್ದನ ವರ್ಮಾಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುಕುಲದ ನಡೆಯು ಭವ್ಯವಾಗಲಿ ಎಂದು ಹಾರೈಸಿದರು.

ದೀಪ ಬೆಳಗುವುದರ ಮೂಲಕ ವಿದ್ಯಾ ನಿಕಷದಉದ್ಘಾಟನೆ

ಈ ಸಂದರ್ಭದಲ್ಲಿವೇದಾಂತ, ನ್ಯಾಯ, ಕಂಠಪಾಠ ಎಂಬ ಮೂರು ವಿಭಾಗದ ಶಾಸ್ತ್ರಪರೀಕ್ಷೆಯು ನಡೆಯಿತು.ಡಾ|| ಗಣೇಶಈಶ್ವರ ಭಟ್ ಮತ್ತು ವಿ. ಅನಂತಶರ್ಮಾಅವರು ವೇದಾಂತ ಪರೀಕ್ಷಕರಾಗಿಯೂ, ವಿ.ಸತ್ಯನಾರಾಯಣ ಮತ್ತುಕಾರ್ತಿಕ ವಾಗ್ಳೆಅವರು ನ್ಯಾಯವಿಭಾಗದ ಪರೀಕ್ಷಕರಾಗಿಯೂ, ಟಿ. ಎನ್. ಪ್ರಭಾಕರ ಮತ್ತು ಮುರಳಿಕೃಷ್ಣ ಅವರುಕಂಠಪಾಠ ವಿಭಾಗದ ಪರೀಕ್ಷಕರಾಗಿಯೂ ಉಪಸ್ಥಿತರಿದ್ದು, 24 ಛಾತ್ರೆಯರುತಾವುಅಧ್ಯಯನ ಮಾಡಿದ ಶಾಸ್ತ್ರವನ್ನುಇವರ ಮುಂದೆ ನಿವೇದಿಸಿಕೊಂಡರು.

ವಿದ್ವಾಂಸರಿಂದ ನ್ಯಾಯಬೋಧಿನಿ ಅವಲೋಕ£

ವಿದ್ವಾಂಸರಿಂದ ಭಗವದ್ಗೀತಾ ಭಾಷ್ಯದ ಅವಲೋಕನ

ಶಾಸ್ತ್ರಪರೀಕ್ಷೆಯ ಸಮಾರೋಪದಲ್ಲಿ ವಿದ್ವಾಂಸರುಆಶಯಕಥನವನ್ನು ಮಾಡಿದರು.ವೇದಾಂತವಿಭಾಗದ ಪರೀಕ್ಷಕರ ಪರವಾಗಿಡಾ|| ಗಣೇಶಈಶ್ವರ ಭಟ್‍ಅವರುಆಶಯವನ್ನು ತಿಳಿಸಿದರು.ಸಂಸ್ಕೃತ ಸಂಸ್ಕೃತವಾಗಿಯೇ ಉಳಿಯಬೇಕು ಎಂಬುದು ಈ ಗುರುಕುಲದಉದ್ದೇಶ. ಹೊರಗಿನ ಪ್ರಪಂಚದಲ್ಲಿಕಾಣುತ್ತಿರುವದ್ವೇಷ, ನನ್ನದು ಎಂಬ ಭಾವವನ್ನು ತಗ್ಗಿಸಿ ದೇಶ ನನ್ನದು ಎಂಬ ಆದರ್ಶವನ್ನುಇಲ್ಲಿಯಛಾತ್ರೆಯರು ಮೂಡಿಸಿದ್ದಾರೆ. ವಿದ್ಯಾರ್ಥಿನಿಯರುತಮ್ಮ ವಯಸ್ಸು ಮತ್ತುಸಾಮರ್ಥ್ಯವನ್ನು ಮೀರಿ ಪರೀಕ್ಷೆಯನ್ನು ನೀಡಿದ್ದಾರೆ. ಯೋಗ್ಯಅಧ್ಯಾಪಕವೃಂದ ಮತ್ತುಅಧ್ಯಯನ ವಾತಾವರಣ ಈ ಗುರುಕುಲದಲ್ಲಿದೆ.ಬರುವ ವರ್ಷಗಳಲ್ಲಿ ಇನ್ನೂಚೆನ್ನಾಗಿಯಶಸ್ಸನ್ನು ನೀವೆಲ್ಲರೂ ಗಳಿಸಿರಿಎಂದು ಹಾರೈಸಿದರು.

ವಿದ್ವಾಂಸರಿಂದಆಶಯಕಥನ ಮತ್ತು ಆಶೀರ್ವಾದ ಪ್ರದಾನ

ನ್ಯಾಯವಿಭಾಗದ ಪರೀಕ್ಷಕರ ಪರವಾಗಿ ವಿ.ಸತ್ಯನಾರಾಯಣಅವರುಗುರುಕುಲದಲ್ಲಿ ನಡೆಯುತ್ತಿರುವಅಧ್ಯಯನಕ್ರಮವನ್ನೇದೇಶದಲ್ಲೆಡೆಅನುಸರಿಸಬೇಕುಎಂದುಅಭಿಪ್ರಾಯಪಟ್ಟರು.ಜೊತೆಗೆಇಲ್ಲಿಯ ವಿದ್ಯಾರ್ಥಿನಿಯರು ನ್ಯಾಯಬೋಧಿನೀಗ್ರಂಥದಕಂಠಪಾಠ ಮತ್ತುಅರ್ಥಕಥನ ಪರೀಕ್ಷೆಯನ್ನುಚೆನ್ನಾಗಿ ನೀಡಿದ್ದಾರೆ. ಈ ಶಾಸ್ತ್ರವುಇತರ ಶಾಸ್ತ್ರದಅಧ್ಯಯನಕ್ಕೂ ಸಹಕಾರಿಆಗಿರುವುದರಿಂದಚೆನ್ನಾಗಿಅಧ್ಯಯನ ಮಾಡಬೇಕುಎಂದು ಬೋಧಿಸಿದರು. ಕಂಠಪಾಠವಿಭಾಗದ ಪರೀಕ್ಷಕರ ಪರವಾಗಿ ಟಿ. ಎನ್. ಪ್ರಭಾಕರಅವರು“ಎಲ್ಲಾ ವಿದ್ಯೆಯನ್ನುಧಾರಣೆ ಮಾಡಿಕೊಳ್ಳಲು ಸಹಕಾರಿಯಾಗಿರುವುದರಿಂದಲೂ, ಸ್ಮರಣಶಕ್ತಿಯ ವರ್ಧನೆಗೆಅಸ್ತ್ರವಾಗಿರುವುದರಿಂದಲೂಕಂಠಪಾಠ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು.ಇಲ್ಲಿನಛಾತ್ರೆಯರುಯಾವುದೇಒತ್ತಡವಿಲ್ಲದೇ ನಿರರ್ಗಳವಾಗಿ ಪರೀಕ್ಷೆಯನ್ನುಕೊಟ್ಟಿದ್ದಾರೆ.ಈ ರೀತಿಯ ಶಾಸ್ತ್ರಪರೀಕ್ಷೆಯುಅಧ್ಯಯನದ ಸಿಂಹಾವಲೋಕನಕ್ಕೊಂದು ಅವಕಾಶ”ಎಂದು ತಿಳಿಸಿದರು.ಕೊನೆಯಲ್ಲಿ ವಿದ್ವಾಂಸರಿಗೆಗೌರವ ಸಮರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಭಾವಚಿತ್ರ 1 ನ್ಯಾಯಬೋಧಿನಿ ಅವಲೋಕನ
ಭಾವಚಿತ್ರ 2 ಉದ್ಘಾಟನೆ
ಭಾವಚಿತ್ರ 3 ಆಶಯಕಥನ
ಭಾವಚಿತ್ರ 4 ಭಗವದ್ಗೀತೆ-ಶಾಂಕರ ಭಾಷ್ಯದ ಅವಲೋಕನ