ನೂತನ ಛಾತ್ರೆಯರ ಪ್ರವೇಶೋತ್ಸವ

Share:
Date: August 13, 2025
Past Events

ನೂತನ ಛಾತ್ರೆಯರ ಪ್ರವೇಶೋತ್ಸವ

ದಿನಾಂಕ 8-6-2025 ರಂದು ಬೆಳಿಗ್ಗೆ 7:೦೦ ಗಂಟೆಗೆ ಧಾರ್ಮಿಕ ವಿಧಿ-ವಿಧಾನಗಳಿಂದ ಅಧಿಶೀಲ ಸ್ತರದ 21 ಛಾತ್ರೆಯರಿಗೆ ಹಾಗೂ ಅಧಿಪ್ರಜ್ಞಾಸ್ತರದಇಬ್ಬರು ವಿದ್ಯಾರ್ಥಿನಿಯರಿಗೆ ದೀಕ್ಷಾ ಪ್ರದಾನ ನಡೆಯಿತು. ಕರ್ನಾಟಕದ 12 ಜಿಲ್ಲೆಗಳಿಂದ ಹಾಗೂ ಆಂಧ್ರ, ಕೇರಳ, ಗುಜರಾತ್ , ಮಧ್ಯ ಪ್ರದೇಶದಿಂದ ಒಟ್ಟು 23 ಛಾತ್ರೆಯರ ಪ್ರವೇಶ ನಡೆಯಿತು.10:00 ರಿಂದ ಸಾವಿತ್ರೀ ಮಾತೃಶ್ರೀಯವರಿಂದ ಪಾಲಕರಿಗೆ ಗುರುಕುಲದ ಸಂಕ್ಷಿಪ್ತ ಪರಿಚಯ. 10:30 ರಿಂದ ಸಭಾಕಾರ್ಯಕ್ರಮ. ಮುಖ್ಯ ಅತಿಥಿಗಳಾಗಿ ಶ್ರೀಯುತ ಕಮಲಾದೇವಿ ಪ್ರಸಾದ ಆಸ್ರಣ್ಣ ಇವರು ಪ್ರವೇಶ ಪಡೆದ ಮಕ್ಕಳಿಗೆ” ನ ಜಹಾತಿ ಸರಸ್ವತೀ ಎಂಬ ಮಾರ್ಕಂಡೆಯಪುರಾಣದ ವಚನದಂತೆ ಯಾವ ಐಶ್ವರ್ಯವೂ ನಷ್ಟವಾದರೂ ಸರಸ್ವತಿ ನಮ್ಮನ್ನು ಬಿಡುವುದಿಲ್ಲ ಹಾಗಾಗಿ ನಾವೆಲ್ಲರೂ ಸರಸ್ವತಿಯ ಆರಾಧಕರಾಗಬೇಕು” ಎಂಬ ಮಾತುಗಳ ಮೂಲಕ ಪ್ರಥಮಪಾಠ ಮಾಡಿದರು. ಸಭಾಧ್ಯಕ್ಷರಾದ ಶ್ರೀಯುತ ಸುಬ್ರಾಯ ಪೈಯವರು ” ಮಳೆ ನೀರು ಎಲ್ಲಿ ಬೀಳುತ್ತದೆಯೋ ಅದೇ ರೂಪವನ್ನು ಪಡೆಯುತ್ತದೆ. ಆದರೆ ಸರೋವರಕ್ಕೆ ಬಿದ್ದಲ್ಲಿ ಮಾತ್ರ ಶುದ್ಧನೀರಾಗಿ ಪರಿವರ್ತನೆಗೊಂಡು ಹೇಗೆ ಸದುಪಯೋಗವಾಗುತ್ತದೆಯೋ ಹಾಗೆ ನಾವು ಅಂತಹ ಶಿಕ್ಷಣವನ್ನು ಪಡೆಯಬೇಕು” ಎಂಬ ಮಾತುಗಳ ಮೂಲಕ ಮಕ್ಕಳಿಗೆ ಪ್ರೇರಣೆ ನೀಡಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ನಂದಾ ಆರ್ಯಾ, ಸ್ವಾಗತ ಪರಿಚಯ ವನಜಾ ಮಾತೃಶ್ರೀ, ಹಾಗೂ ಧನ್ಯವಾದ ಸಮರ್ಪಣೆಯನ್ನು ಪ್ರತ್ನಸಲಕ್ಷ್ಮೀ ಆರ್ಯಾ ಇವರು ನಡೆಸಿಕೊಟ್ಟರು.