ಸುಖೀ ಸಮಾಜ – ನನ್ನ ಕನಸು
ನಮ್ಮ ಸಮಾಜದಲ್ಲಿ ಸಮಸ್ಯೆಗಳು ತುಂಬಾ ಕಾಣುತ್ತಿವೆ. ಅದಕ್ಕೆ ಪರಿಹಾರಗಳೂ ಮಾಡಲಾಗುತ್ತಿವೆ. ಹೀಗಾದರೂ ಹೊಸಹೊಸ ಸಮಸ್ಯೆಗಳು ಹುಟ್ಟುತ್ತಿವೆಯೇ ಹೊರತು ಅವುಗಳು ಕಡಿಮೆಯಾಗುತ್ತಿಲ್ಲ. ಕಾರಣವೇನು….? ಎಂದು ಯೋಚಿಸಿದಾಗ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಮುಂದೆಯಲ್ಲ, ಹಿಂದೆ. ಸಮಸ್ಯೆಯ ಕಾರಣ ನಾಶವಾದಲ್ಲಿ ಸಮಸ್ಯೆಗಳು ನಿಶ್ಶೇಷವಾಗಿ ಕಳೆದು ಹೋಗುತ್ತವೆ ಎಂದು ತಿಳಿದು ಬಂದಿತು. ಈ ಚಿಂತನೆಯ ಆಧಾರದ ಮೇಲೆ ನನ್ನ ಮನದಲ್ಲಿ ಮೂಡಿಬಂದ ಅಪೇಕ್ಷೆಗಳನ್ನು ಅಕ್ಷರಗಳಾಗಿ ಇಳಿಸುವ ಪುಟ್ಟ ಯತ್ನವನ್ನು ಮಾಡುತಿದ್ದೇನೆ. ಶಿಕ್ಷಣ ವ್ಯವಸ್ಥೆಯ ಪೂರ್ತಿ ಅಧಿಕಾರವನ್ನು ಜ್ಞಾನಿಗಳಿಗೆ, ಸಚ್ಚಾರಿತ್ರ್ಯವುಳ್ಳವರಿಗೆ ಸಭ್ಯರಾಗಿರುವ ಹಾಗೂ ಉತ್ತಮ […]